Flood Relief Camp at Badrinath Shri Kashi Math as ordered by H.H Shrimath Sudhindra Thirtha Swamiji, Mathadhipati of Shree Kashi Math Samsthan, where food and accommodation facilities were being provided for the flood affected pilgrims.
ಶ್ರೀ ಬದರೀನಾಥ ಕ್ಷೇತ್ರ ದ ಶ್ರೀ ಕಾಶೀ ಮಠದಲ್ಲಿ ಪ್ರವಾಹ ಸಂತ್ರಸ್ಥರಿಗೆ ವ್ಯವಸ್ಥೆ
ಉತ್ತರಾಖಂಡದ ಶ್ರೀ ಬದರೀನಾಥ ಕ್ಷೇತ್ರದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಸುಮಾರು 500ಕ್ಕೂ ಮಿಕ್ಕಿದ ಯಾತ್ರಾರ್ಥಿಗಳಿಗೆ ಉಚಿತ ವಸತಿ, ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಶ್ರೀ ಬದರೀನಾಥ ಕ್ಷೇತ್ರದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾ ಮಠ ಇದ್ದು ಶ್ರೀ ಸಂಸ್ಥಾನದ ಪಟ್ಟ ಶಿಷ್ಯ ಶ್ರೀಮತ್ ಸಂಯಮಿಂದ್ರ ತೀರ್ಥ ಶ್ರೀಪಾದಂಗಳವರ 10 ದಿನಗಳ ಮೊಕ್ಕಾಂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರವಾಹದ ಕಾರಣದಿಂದ ಮೊಕ್ಕಾಂ ರದ್ಹು ಗೋಳಿಸಲಾಗಿದ್ದು ಶ್ರೀಗಳವರ ಮೊಕ್ಕಾಂ ನಿಮಿತ ಸುಮಾರು 3000 ಸಾವಿರ ಯಾತ್ರಾರ್ಥಿಗಳಿಗೆ ತಯಾರಿಸಲ್ಪಟ್ಟ ಆಹಾರ, ಅಕ್ಕಿ, ದವಸ, ಧಾನ್ಯಗಳ ವ್ಯವಸ್ಥೆ ಮಾಡಲಾಗಿತು. ಇದೇ ಸಂಧರ್ಭ ದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧಿಪತಿಗಳಾದ ಶ್ರೀಮತ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ದಿನಾಂಕ ೧೭.೦೬.೨೦೧೩ರಿಂದ ಇಂದಿನ ವರೆಗೆ ಪ್ರತಿದಿನ 500ಕ್ಕೂ ಮಿಕ್ಕಿ ಸಂಕಷ್ಟಕ್ಕೀಡಾಗಿರುವ ಯಾತ್ರಾರ್ಥಿಗಳಿಗೆ ಉಚಿತ ವಸತಿ, ಆಹಾರ ವ್ಯವಸ್ಥೆ ಶ್ರೀ ಮಠದಲ್ಲಿ ಆತಿಥ್ಯ ನೀಡಲಾಯಿತು . ರಾಜಸ್ಥಾನ, ದೆಹಲಿ ದೇಶದ ವಿವಿಧ ರಾಜ್ಯಗಳಿಂದ ಅಗಮಿಸಿಧ ಯಾತ್ರಾರ್ಥಿಗಳು ಫಲಾನುಭವಿಗಳಾಧರು . ಶ್ರೀಪಾದಂಗಳವರ ಮಾರ್ಗದರ್ಶನದಂತೆ ಶ್ರೀ ವೇದವ್ಯಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಕೆಲಸ ಕಾರ್ಯಗಳನ್ನು ಅಯೋಗಿಸಲಾಗಿತು. ಇಂದಿನಿಂದ ಸ್ವಲ್ಪ ಕಾಲದ ಮಟ್ಟಿಗೆ ಮುಚಲ್ಪಟು, ಪರಿಸ್ಥಿತಿ ಸುಧಾರಿಸಿಧ ಬಳಿಕ ಪುನಃ ತೆರೆಯಲ್ಪಡುವುದು. ಈ ಎಲ್ಲಾ ಕಾರ್ಯಗಳನ್ನು ಶಾಖಾ ಮಠದ ವ್ಯವಸ್ಥೆಯನ್ನು ನೋಡಿ ಕೊಳ್ಳುತಿದ್ದ ರಂಗನಾಥ್ ಮಲ್ಲ್ಯ ಮತ್ತು ವಿಜಯಕುಮಾರ್ ಪೈಯವರು ಸೂಕ್ತವಾಗಿ ನೆರವೇರಿಸಿಧರು.